ರೆಡ್ ಒಂದು ಥ್ರಿಲ್ಲರ್ ಚಿತ್ರ
Posted date: 11 Thu, Feb 2016 – 11:34:36 AM

 ಇತ್ತೀಚೆಗೆ ಸ್ಯಾಂಡಲ್‌ವುಡ್‌ನಲ್ಲಿ ಥ್ರಿಲ್ಲರ್ ಚಿತ್ರಗಳ ನಿರ್ಮಾಣ ಜಾಸ್ತಿಯಾಗಿದೆ.  ಅದರಲ್ಲೂ ವಿಶೇಷ ಎನಿಸುವಂಥ ಚಿತ್ರಗಳನ್ನು ವೀಕ್ಷಕರೂ ಸ್ವೀಕರಿಸುತ್ತಿದ್ದಾರೆ.  ಅದೇ ರೀತಿ ಮತ್ತೊಂದು ರೋಚಕ ಥ್ರಿಲ್ಲರ್ ಚಿತ್ರವೊಂದು ಸದ್ದಿಲ್ಲದೆ ನಿರ್ಮಾಣವಾಗಿ ಇದೀಗ ಬಿಡುಗಡೆಗೆ ಸಿದ್ಧವಾಗಿದೆ.

    ರೆಡ್ ಎಂಬ ಹೆಸರಿನ ಈ ಚಿತ್ರಕ್ಕೆ ರಾಜಶೇಖರ ಮೂರ್ತಿ ಅವರು ಕಥೆ, ಚಿತ್ರಕಥೆ ಹಾಗೂ ಹಾಡುಗಳನ್ನು ಬರೆದು ನಿರ್ದೇಶನ ಮಾಡಿದ್ದಾರೆ.  ಅಲ್ಲದೆ ನಿರ್ಮಾಪಕರೂ ಆಗಿದ್ದಾರೆ.  ಈ ಹಿಂದೆ ಷಡ್ಸಂತ್ರ, ಮನಿ ಹನಿ ಶನಿ ಎಂಬ ಚಿತ್ರಗಳನ್ನು ನಿರ್ಮಿಸಿದ್ದ ರಾಜಶೇಖರ್ ಮೂರ್ತಿ ಅವರ ನಿರ್ಮಾಣ ನಿರ್ದೇಶನದಲ್ಲಿ ಬರುತ್ತಿರುವ ಮೂರನೇ ಚಿತ್ರ ಇದಾಗಿದೆ.  ಕಾರ್ತಿಕ್ ಅವರು ಈ ಚಿತ್ರದ ಸಂಭಾಷಣೆಗಳನ್ನು ರಚಿಸಿದ್ದಾರೆ.  ಬೆಂಗಳೂರು ಸುತ್ತಮುತ್ತ ಚಿತ್ರೀಕರಣ ನಡೆಸಲಾಗಿರುವ ಈ ಚಿತ್ರ ಈಗಾಗಲೇ ಸೆನ್ಸಾರ ಮಂಡಳಿಯಿಂದ ಎ ಪ್ರಮಾಣ ಪತ್ರ ಪಡೆದಿದೆ.  ರೆಡ್ ಇದೊಂದು ಹಲವಾರು ಶೃಂಗಾರಭರಿತ ಸನ್ನಿವೇಶಗಳಿಂದ ಕೂಡಿದ ಥ್ರಿಲ್ಲರ್ ಚಿತ್ರವಾಗಿದೆ.  ರಾಜ್ ಆರ್ಯನ್, ಕಾಮಿನಿ, ರಾಹುಲ್ ಸೋಮಣ್ಣ, ಎಂ.ಜೆ.ಪೃಥ್ವಿ ಹಾಗೂ ಪಂಚಮಿ ಈ ಚಿತ್ರದ ಪ್ರಮುಖ ತಾರಾಗಣದಲ್ಲಿದ್ದಾರೆ.

Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed